ರೂಪಾಂತರ-ಒಂದು ಪರಿವರ್ತನಾ ಪಯಣ

ಕರ್ನಾಟಕ ಕಾರಾಗೃಹಗಳ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಕೈಗೊಂಡ ಒಂದು ವಿನೂತನ ಕಾರ್ಯಕ್ರಮ. ಕಾರಾಗೃಹ ಇಲಾಖೆ ಮತ್ತು ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮವು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಹೊಂದುವ ಬಂದಿಗಳನ್ನು ಭವಿಷ್ಯದ ಜೀವನಕ್ಕೆ ಸಜ್ಜುಗೊಳಿಸಲು ಹಾಗೂ ಬಂದಿಖಾನೆಯ ಗೂಡೆಗಳಿಂದಾಚೆಗಿನ ಬಾಹ್ಯ ಪ್ರಪಂಚದ ಜೀವನಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಅಣಿವುಗೊಳಿಸುವು ಕಾರ್ಯಕ್ರಮ ಇದಾಗಿದೆ. ಸದರಿ ಕಾರ್ಯಕ್ರಮವು ಕರ್ನಾಟಕದಲ್ಲೇ ಅಲ್ಲದೆ ಇಡಿ ದೇಶದಲ್ಲಿ ಕಾರಾಗೃಹ ವಾಸದ ಇತಿಹಾಸದಲ್ಲಿಯೇ ಇದೊಂದು ಪ್ರಪ್ರಥಮ ಪ್ರಯತ್ನವಾಗಿದೆ. ಈ ಕಾರ್ಯಕ್ರಮದಲ್ಲಿ ಜೀವಾವಧಿ ಶಿಕ್ಷೆಗೊಳಪಟ್ಟ ಅಧಿಕಾರಿಗಳು ಸನ್ನಡತೆಯ ಆಧಾರ ಮೇಲೆ ಬಿಡುಗಡೆ ಹೊಂದುತ್ತಿದ್ದಾರೆ ಅಂತಹ ಬಂದಿಗಳಿಗೆ ಒಂದು ಶಿಬಿರವನ್ನು ಏರ್ಪಡಿಸಿ ಆ ಶಿಬಿರದಲ್ಲಿ ಈ ಕೆಳಕಂಡ ಉಪಕ್ರಮಗಳನ್ನು ಅಳವಡಿಸಿಕೊಂಡು ಅವರನ್ನು ಬಿಡುಗಡೆಯ ನಂತರ ಗೌರವಯುತವಾಗಿ ಸಾಮಾರ್ಥವನ್ನು ರೂಢಿಸಿ ಸಜ್ಜುಗೊಳಿಸುವ ಕಾರ್ಯಕ್ರಮವೇ ಈ ಶಿಬಿರವಾಗಿದೆ.


೧) ಬಂಧಿಗಳ ವೈಯಕ್ತಿಕ ಚಿತ್ರಣ.


೨) ಬಿಡುಗಡೆಗಾಗಿ ದೈಹಿಕ ಸಿದ್ಧತೆ.


೩) ಬಿಡುಗಡೆಗಾಗಿ ಮಾನಸಿಕ ಹಾಗೂ ಭಾವನಾತ್ಮಕ ಸಿದ್ಧತೆ .


೪) ಬಿಡುಗಡೆಗಾಗಿ ಸಾಮಾಜಿಕ ಸಿದ್ಧತೆ.


೫) ಬಿಡುಗಡೆಗಾಗಿ ಆಧ್ಯಾತ್ಮಿಕವಾಗಿ ಸಿದ್ಧತೆ.


೬) ಬಿಡುಗಡೆಯ ನಂತರ ಅನುಪಾಲನೆ.


ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್