ಆರೋಗ್ಯ ಭಾಗ್ಯ ಯೋಜನೆ
ಕಾರಾಗೃಹ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಆರೋಗ್ಯ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ಯೋಜನೆಯಾದ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರೊಂದಿಗೆ ಕುಟುಂಬದವರು ಕೂಡ ಈ ಯೋಜನೆಯಡಿಯಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಕಳೆದ ಮೂರು ವರ್ಷದಲ್ಲಿ ಈ ಯೋಜನೆಯಿಂದ ಲಾಭ ಪಡೆದ ಸದಸ್ಯರುಗಳ ಸಂಖ್ಯ ಈ ಕೆಳಕಂಡಂತಿದೆ.
ವರ್ಷ | ಫಲಾನುಭವಿಗಳ ಸಂಖ್ಯೆ |
---|---|
2016-17 | 200 |
2017-18 | 280 |
2018-19 | 156 |
2019-20 | 281 |
ಕರ್ನಾಟಕ ಕಾರಾಗೃಹಗಳ ಸಿಬ್ಬಂದಿ ಕಲ್ಯಾಣ ನಿಧಿ :
ಕಾರಾಗೃಹಗಳ ಇಲಾಖೆಯ ಸೇವೆಯಲ್ಲಿ ಸಿಬ್ಬಂದಿಗಳಿಗೆ ಎದುರಾಗುವ ಅಪಾಯದ ಮತ್ತು ಕ್ಲಿಷ್ಟ ಹೊಣೆಗಾರಿಕೆಯ ಅಂಶಗಳನ್ನು ಮನಗಂಡು ಹಾಗೂ ಕಾರಾಗೃಹಗಳ ಸಿಬ್ಬಂದಿಯ ಕುಟುಂಬಕ್ಕೆ ಅನುಕೂಲ ಕಲ್ಪಿಸುವ ಹಿನ್ನಲೆಯಲ್ಲಿ ಕರ್ನಾಟಕ ಕಾರಾಗೃಹಗಳ ಸಿಬ್ಬಂದಿ ಕಲ್ಯಾಣ ನಿಧಿಗೆ ಸರ್ಕಾರ ಮಂಜೂರಾತಿ ನೀಡಿದೆ. ಕಳೆದ ಮೂರು ವರ್ಷದಲ್ಲಿ ಹಾಗೂ ವರದಿಯ ವರ್ಷದಲ್ಲಿ ಈ ಯೋಜನೆಯಿಂದ ಲಾಭ ಪಡೆದ ಸದಸ್ಯರುಗಳ ಮಾಹಿತಿ ಈ ಕೆಳಕಂಡಂತಿದೆ.
ವರ್ಷ | ಫಲಾನುಭವಿಗಳ ಸಂಖ್ಯೆ |
---|---|
2016-17 | 101 |
2017-18 | 56 |
2018-19 | 56 |
2019-20 | 50 |