ಕಟ್ಟಡಗಳು

ಬ್ರಿಟೀಷ್ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಕಾರಾಗೃಹಗಳ ಕಟ್ಟಡಗಳು ಹಾಗೂ ಸಿಬ್ಬಂದಿ ವಸತಿಗೃಹಗಳು ಅನುದಾನದ ಕೊರತೆಯಿಂದಾಗಿ ಕಾಲಕಾಲಕ್ಕೆ ಸಮರ್ಪಕ ನಿರ್ವಹಣೆ, ದುರಸ್ತಿ, ಜೀರ್ಣೋದ್ದಾರ ಕೈಗೊಳ್ಳದೆ ಇರುವುದರಿಂದ ಶಿಥಿಲಾವಸ್ಥೆಯನ್ನು ತಲುಪಿರುತ್ತವೆ. ಸಿಬ್ಬಂದಿ ವಸತಿಗೃಹಗಳನ್ನೊಳಗೊಂಡಂತೆ ಮೇಲ್ಕಂಡ ದುರಸ್ತಿ, ಜೀರ್ಣೋದ್ದಾರ ಹೆಚ್ಚುವರಿ ಮಾರ್ಪಾಡು ಇತ್ಯಾದಿಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ಲೋಕೋಪಯೋಗಿ ಇಲಾಖೆ ಲೆಕ್ಕ ಶೀರ್ಷಿಕೆಯಡಿ ಅನುದಾನ ಪಡೆದುಕೊಳ್ಳಲು ಪ್ರಯತ್ನಗಳು ಮುಂದುವರೆದಿವೆ.

೨೦೧೬-೧೭ ನೇ ಸಾಲಿಗೆ ಮುಖ್ಯ ಲೆಕ್ಕ ಶೀರ್ಷಿಕೆ ೪೦೫೯-೮೦-೦೫೧-೦-೦೩-೧೩೨ ಕಾರಾಗೃಹಗಳ ನಿರ್ಮಾಣ (ಯೋಜನೆ) ಅನುದಾನದ ಬಳಕೆ ವಿವರ

ಕಾಮಗಾರಿ ವಿವರ ಮೊತ್ತ ರೂ
೧. ಶಿವಮೊಗ್ಗ ನೂತನ ಕಾರಾಗೃಹ ನಿರ್ಮಾಣ ೫,೫೦,೦೦,೦೦೦.೦೦
೫,೫೦,೦೦,೦೦೦.೦೦
೧,೮೭,೨೫,೦೦೦.೦೦
೨,೨೯,೭೪,೦೦೦.೦೦
೨. ಹಳಿಯಾಳದಲ್ಲಿ ನೂತನ ಉಪ ಕಾರಾಗೃಹ ನಿರ್ಮಾಣ ೫೦,೦೦,೦೦೦.೦೦
೫೦,೦೦,೦೦೦.೦೦
೩. ಮಂಗಳೂರು ನೂತನ ಕೇಂದ್ರ ಕಾರಾಗೃಹ – ಮುಖ್ಯ ಗೋಡೆ ನಿರ್ಮಾಣ ೨,೦೦,೦೦,೦೦೦.೦೦
೪.ಕೊಪ್ಪಳದಲ್ಲಿ ಕಾರಾಗೃಹ ಅಧಿಕಾರಿ/ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಾಣ-ಭೂ ಪರಿಹಾರ ವೆಚ್ಚ ೧೨,೭೫,೦೦೦.೦೦

೨೦೫೯-೮೦-೦೫೧-೦-೦೮ ಜೈಲುಗಳು ೨೦೦ ನಿರ್ವಹಣೆ

೧. ಪಿ.ಐ.ಐ. ಮೈಸೂರಿನಲ್ಲಿ ಮೂಲಸೌಕರ್ಯ ಅಭಿವೃದ್ದಿ ೫೦,೦೦,೦೦೦.೦೦
೨. ಮಹಿಳಾ ಕೇಂದ್ರ ಕಾರಾಗೃಹದಲ್ಲಿ ಮೂಲಸೌಕರ್ಯ ಅಭಿವೃದ್ದಿ ೧೦,೦೦,೦೦೦.೦೦
೩. ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಮೂಲಸೌಕರ್ಯ ಅಭಿವೃದ್ದಿ ೧೨,೫೦,೦೦೦.೦೦
೪. ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ಮೂಲಸೌಕರ್ಯ ಅಭಿವೃದ್ದಿ ೭,೫೦,೦೦೦.೦೦
೫. ಬಾಗಲಕೋಟೆ ಜಿಲ್ಲಾ ಕಾರಾಗೃಹದಲ್ಲಿ ಮೂಲಸೌಕರ್ಯ ಅಭಿವೃದ್ದಿ ೧೦,೦೦,೦೦೦.೦೦
೬. ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಮೂಲಸೌಕರ್ಯ ಅಭಿವೃದ್ದಿ ೧೦,೦೦,೦೦೦.೦೦
೭. ಬೆಂಗಳೂರು ಕೇಂದ್ರ ಕಾರಾಗೃಹ ಆವರಣದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ೧,೦೦,೦೦,೦೦೦.೦೦

೪೨೧೬-೦೧-೭೦೦-೦೨-೧೦ ಜೈಲುಗಳು ೩೮೬ ನಿರ್ಮಾಣ

೧. ಶಿವಮೊಗ್ಗ ನೂತನ ಕಾರಾಗೃಹದ ಅಧಿಕಾರಿ/ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಾಣ ೫,೦೦,೦೦,೦೦೦.೦೦

೨೦೫೬-೦೦-೧೦೧-೦-೦೧ ಜೈಲುಗಳು ೨೦೦ ನಿರ್ವಹಣಾ ವೆಚ್ಚ (ಯೋಜನೇತರ)– ಕಾಮಗಾರಿಗಳ ವಿವರ

ಕ್ರ.ಸಂ. ವಿಷಯ
ಕೇಂದ್ರ ಕಾರಾಗೃಹ, ಗುಲ್ಬರ್ಗಾ ಕಟ್ಟಡದ ರಿಪೇರಿ ಮತ್ತು ಕಾಂಪೌಂಡ್ ಗೋಡೆ ನಿರ್ಮಾಣ
ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಎಲೆಕ್ಟ್ರಿಕಲ್ ರೀವೈರಿಂಗ್ ಮತ್ತು ಪ್ಯಾನಲ್ ಬೋರ್ಡ್ ಅಳವಡಿಕೆ
ಬೆಂಗಳೂರು ಅತ್ತಿಬೆಲೆ ವಸತಿಗೃಹಗಳಲ್ಲಿ ವಿದ್ಯುತ್ ರಿಪೇರಿ
ಚಿಂತಾಮಣಿ ತಾ:: ಉಪ ಕಾರಾಗೃಹದ ವಸತಿಗೃಹಗಳಲ್ಲಿ ರಿಪೇರಿ ಕಾಮಗಾರಿ
ಜಿಲ್ಲಾ ಕಾರಾಗೃಹ, ಮಡಿಕೇರಿ ಸಿಬ್ಬಂದಿ ವಸತಿಗೃಹ ರಿಪೇರಿ
ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಸಂಪ್ ರಿಪೇರಿ ಮತ್ತು ಇತರೆ ಅಭಿವೃದ್ದಿ ಕಾಮಗಾರಿ
ಬಯಲು ಬಂದೀಖಾನೆಯಲ್ಲಿ ರಿಪೇರಿ ಮತ್ತು ನವೀಕರಣದ ಕೆಲಸ.
ಧಾರವಾಡ ಕೇಂದ್ರ ಕಾರಾಗೃಹದ ಸಂದರ್ಶನ ಕೊಠಡಿಯ ನವೀಕರಣ ಮತ್ತು ಇತರೆ ರಿಪೇರಿ ಕಾಮಗಾರಿ
ಹುಬ್ಬಳ್ಳಿ ತಾ:: ಉಪ ಕಾರಾಗೃಹದಲ್ಲಿ ಜನರೇಟರ್ ಕೊಠಡಿ ನಿರ್ಮಾಣ
೧೦ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ರಿಪೇರಿ ಮತ್ತು ನವೀಕರಣ ಕಾಮಗಾರಿ
೧೧ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸಂದರ್ಶನ ಕೊಠಡಿ ರಿಪೇರಿ ಮತ್ತು ಕೆ.ಎಸ್.ಐ.ಎಸ್.ಎಫ್., ರವರಿಗೆ ಷೆಡ್ ನಿರ್ಮಾಣ.

೨೪. ಶಿವಮೊಗ್ಗ ಜಿಲ್ಲಾ ಕಾರಾಗೃಹವನ್ನು ನಗರದ ಹೊರವಲಯಕ್ಕೆ ಸ್ಧಳಾಂತರಿಸುವ ಬಗ್ಗೆಃ

ಶಿವಮೊಗ್ಗ ಜಿಲ್ಲಾ ಕಾರಾಗೃಹವನ್ನು ಸುಮಾರು ೬೦೦ ಬಂದಿಗಳಿಗೆ ಸ್ಧಳಾವಕಾಶ ಕಲ್ಪಿಸಿ ಸುಸಜ್ಜಿತವಾದ ನವೀನ ಮಾದರಿಯ ಜಿಲ್ಲಾ ಕಾರಾಗೃಹ ನಿರ್ಮಿಸಲಾಗುತ್ತಿದೆ . ಕಾರಾಗೃಹ ನಿರ್ಮಾಣಕ್ಕಾಗಿ ರೂ ೫೦.೧೭ ಕೋಟಿ ಮತ್ತು ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕಾಗಿ ರೂ ೨೯.೫೯ ಕೋಟಿ ಹೀಗೆ ಒಟ್ಟಾರೆ ರೂ೭೯.೭೬ ಕೋಟಿಗಳ ಅಂದಾಜಿಗೆ ಸರ್ಕಾರವು ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು,

೨೪ (೧). ಬೆಂಗಳೂರು ಕೇಂದ್ರ ಕಾರಾಗೃಹದ ಬಳಿ ಎರಡು ಪ್ರತ್ಯೇಕ ಕಾರಾಗೃಹಗಳ ನಿರ್ಮಾಣ ಮಾಡುವ ಬಗ್ಗೆಃ

ಬಂದಿಗಳಿಗೆ ಹೆಚ್ಚಿನ ಸ್ಧಳಾವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಬೆಂಗಳೂರು ಕೇಂದ್ರ ಕಾರಾಗೃಹದ ಬಳಿ ಎರಡು ಪ್ರತ್ಯೇಕ ಕಾರಾಗೃಹಗಳ (ಸಜಾ ಮತ್ತು ಮಹಿಳಾ ಕಾರಾಗೃಹ)ನಿರ್ಮಾಣಕ್ಕೆ ಸರ್ಕಾರವು ಆದೇಶ ಸಂಖ್ಯೆ ಹೆಚ್‌ಡಿ ೨೫೧ ಪಿಆರ್‌ಎ೨೦೧೦ ದಿಃ ೨೫.೨.೨೦೧೧ ರಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿ ಮೊದಲ ಹಂತದಲ್ಲಿ ಸಜಾ ವಿಭಾಗದಲ್ಲಿ ಮೂರು ಕಟ್ಟಡಗಳ ಹಾಗೂ ಮಹಿಳಾ ವಿಭಾಗದಲ್ಲಿ ಒಂದು ಕಟ್ಟಡದ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿದೆ .

೨೪(೨). ಕಾರಾಗೃಹಗಳನ್ನು ನಗರದ ಹೊರ ವಲಯಕ್ಕೆ ಸ್ಧಳಾಂತರಿಸುವ ಬಗ್ಗೆ :-

ಮಂಗಳೂರು, ಬಿಜಾಪುರ ಹಾಗೂ ಬೀದರ್ ಕಾರಾಗೃಹಗಳನ್ನು ನಗರದ ಹೊರವಲಯಕ್ಕೆ ಸ್ಧಳಾಂತರಿಸುವ ದಿಶೆಯಲ್ಲಿ ಅಗತ್ಯ ಭೂಮಿಯು ಮಂಜೂರಾಗಿರುತ್ತದೆ. ವಿವರ ಕೆಳಕಂಡಂತಿದೆ

ಸ್ಧಳ ಮಂಜೂರಾದ ಜಮೀನಿನ ವಿಸ್ತೀರ್ಣ
ಕೇಂದ್ರ ಕಾರಾಗೃಹ ಬಿಜಾಪುರ ೪೦.೦೦ ಎಕರೆ
ಜಿಲ್ಲಾ ಕಾರಾಗೃಹ ಮಂಗಳೂರು ೬೩.೮೯ ಎಕರೆ
ಕೇಂದ್ರ ಕಾರಾಗೃಹ ಬೀದರ್ ೪೯.೦೦ ಎಕರೆ

ಕಾರಾಗೃಹಗಳನ್ನು ಸ್ಧಳಾಂತರಿಸಲು ನೂತನವಾಗಿ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಮೀನಿನ ಮಾಹಿತಿ / ಜಮೀನುಗಳು ಸಂಬಂದಿಸಿದ ಇಲಾಖೆಗಳಿಂದ ಮಂಜೂರಾಗಬೇಕಾಗಿದ್ದು ಈ ನಿಟ್ಟಿನಲ್ಲಿ ಈ ಇಲಾಖೆಯಿಂದ ಅಗತ್ಯ ಕ್ರಮ ಜರುಗಿಸಲಾಗಿದೆ.

೧. ಸಾಗರ ತಾಲ್ಲೂಕು ಉಪ ಕಾರಾಗೃಹವನ್ನು ಸ್ದಳಾಂತರಿಸಲು ನೂತನ ಕಾರಾಗೃಹ ಕಟ್ಟಡ ನಿರ್ಮಾಣಕ್ಕೆ ೧೦ ಎಕರೆ ಜಮೀನನ್ನು ಗುರುತಿಸಲಾಗಿರುತ್ತದೆ.​

ಹಿಂದಿನಪುಟ | ಮುಂದಿನಪುಟ

ನೂತನ ಕಟ್ಟಡಗಳು

ಹಕ್ಕುಗಳು ಇವರಿಂದ : ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್