ಮಾಹಿತಿ ಹಕ್ಕು ಅಧಿನಿಯಮ :

ವರದಿಯ ವರ್ಷದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಸಂಬಂದಿಸಿದಂತೆ ಬಂದ ಅರ್ಜಿಗಳು ಮತ್ತು ಅವುಗಳ ವಿಲೇ ಬಗೆಗಿನ ಮಾಹಿತಿ ಈ ಕೆಳಕಂಡಂತೆ ಇದೆ.

ಕ್ರಮ ಸಂಖ್ಯೆ ಸ್ವೀಕೃತವಾದ ಅರ್ಜಿಗಳು ೨೦೧೨-೧೩ ವಿಲೇ ಆದ ಅರ್ಜಿಗಳು ಸ್ವೀಕರಿಸಿದ ಶುಲ್ಕ.
೦೧ ೧೦೬ ೮೭ ರೂ ೧೨೧೧.೦೦

ಅಖಿಲ ಭಾರತ ಕಾರಾಗೃಹಗಳ ಇಲಾಖಾ ಮುಖ್ಯಸ್ತರುಗಳ ಸಮಾವೇಶ

ದಿನಾಂಕ ೧೬.೩.೨೦೧೨ ಮತ್ತು ೧೭.೩.೨೦೧೨ ರವರೆಗೆ ಬೆಂಗಳೂರಿನಲ್ಲಿ ಅಖಿಲ ಭಾರತ ಕಾರಾಗೃಹಗಳ ಇಲಾಖಾ ಮುಖ್ಯಸ್ಥರುಗಳ ಸಮಾವೇಶವು ಯಶಸ್ವಿಯಾಗಿ ಜರಗಿತು. ಸದರಿ ಸಮಾವೇಶವನ್ನು ಕರ್ನಾಟಕ ಕಾರಾಗೃಹ ಇಲಾಖೆಯು ಕೇಂದ್ರ ಸರ್ಕಾರದ ಬಿ ಆರ್ ಅಂಡ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಕಾರಾಗೃಹ ಇಲಾಖೆಯ ಸಂಬಂಧಿಸಿದ ಪ್ರಮುಖ ವಿಷಯಗಳಾದ ಪ್ರಿಸನ್ ಸೆಕ್ಯೂರಿಟೀ, ಸ್ಟಾಫ್ ಡೆವೆಲಪ್‌ಮೆಂಟ್, ಆಗ್ಮೆನ್‌ಟೇಶನ್ ಆಫ್ ಪ್ರಿಸನ್ ಟ್ರೈನಿಂಗ್, ಪ್ರಿಸನ್ ಮಾಡರ್ನಿಸೇಶನ್ ಮೇಲೆ ಚರ್ಚಿಸಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಇಲಾಖಾ ವಿಚಾರಣೆ ಪ್ರಕರಣಗಳ ಅಂಕಿ ಅಂಶ:

೨೦೧೬-೧೭ ನೇ ಸಾಲಿನಲ್ಲಿ ಇಲಾಖೆಯಲ್ಲಿ ೨೭ ಪ್ರಕರಣಗಳು ದಾಕಲಾಗಿದ್ದು, ೧೭ ಪ್ರಕರಣಗಳು ವಿಚಾರಣೆಗಳು ವಿವಿಧ ಹಂತದಲ್ಲಿರುತ್ತವೆ.

ರಾಜ್ಯದ ವಿವಿಧ ಕಾರಾಗೃಹಗಳ ಮುಖ್ಯಸ್ಥರುಗಳ ಸಭೆಗಳು:

ರಾಜ್ಯದ ಕಾರಾಗೃಹಗಳ ಭದ್ರತೆ, ಮೂಲಭೂತ ಸೌಕರ್ಯಗಳು, ಆಡಳಿತ ನಿರ್ವಹಣೆ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಆಗಿಂದಾಗ್ಗೆ ಕಾರಾಗೃಹಗಳ ಮುಖ್ಯಸ್ಥರುಗಳ ಸಭೆಗಳನ್ನು ದಿ:೨೨.೦೨.೨೦೧೨ದ ೨೯.೦೫.೨೦೧೨ದ ೧೭.೧೦.೨೦೧೨, ೫.೧೨.೨೦೧೨ಗಳ೦ದು ಕರೆದು ಸಲಹೆ ಸೂಚನೆ ಮತ್ತು ಸಂಬಂಧಿಸಿದ ಆದೇಶಗಳನ್ನು ನೀಡಲಾಗಿದೆ. ಕಾರಾಗೃಹಗಳಲ್ಲಿ ಮೊಬೈಲ್, ಗಾಂಜಾ, ಹಾಗೂ ಇನ್ನಿತರೆ ಯಾವುದೇ ನಿಷೇಧಿತ ವಸ್ತುಗಳ ಪ್ರವೇಶಕ್ಕೆ ಆಸ್ಪದವೀಯದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಅನುಸರಿಸಲು ನಿದರ್ಶನಗಳನ್ನು ನೀಡಲಾಗಿದೆ.

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್