ಬಯಲು ಬಂದೀಖಾನೆ, ಕೋರಮಂಗಲ, ದೇವನಹಳ್ಳಿ ತಾಲ್ಲೂಕು:ಬೆಂಗಳೂರು ಗ್ರಾಮಾಂತರ ಜಿಲ್ಲೆ

ಸುಧಾರಣಾ ಕ್ರಮಗಳ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೋರಮಂಗಲದಲ್ಲಿ ಬಯಲು ಬಂದೀಖಾನೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಕೈದಿಗಳು ಕನಿಷ್ಟ ಭದ್ರತೆಯಲ್ಲಿ ಕೆಲಸ ಮಾಡುತ್ತಾರೆ. ಈ ಸಂಸ್ಥೆಗೆ ೧೧೪ ಎಕರೆ ಜಾಮೀನು ಇರುತ್ತದೆ. ಈ ಬಂದೀಖಾನೆಯಲ್ಲಿ ೮೦ ಜನ ಕೈದಿಗಳಿಗೆ ಸ್ಥಳಾವಕಾಶವಿರುತ್ತದೆ. ಈಗ ೩೮ ಮಂದಿ ಬಂದಿಗಳು ಇರುತ್ತಾರೆ. ಅಜೀವ ಕಾರಾಗೃಹವಾಸಿಗಳನ್ನು ಅದರಲ್ಲಿಯೂ ೫ ವರ್ಷಗಳ ಶಿಕ್ಷೆಯನ್ನು ಮುಗಿಸಿ ಮೊದಲಿದ್ದ ಕಾರಾಗೃಹಗಳಲ್ಲಿ ಸಚ್ಚಾರಿತ್ರ್ಯ ಹೊಂದಿ ಉತ್ತಮ ಗುಣ ಹಾಗೂ ನಡುವಳಿಕೆಯುಳ್ಳವರನ್ನು ಇಲ್ಲಿಗೆ ವರ್ಗಾಯಿಸಲಾಗುತ್ತದೆ. ಇಲ್ಲಿ ಬಂದಿಗಳಿಗೆ ಆಧುನಿಕ ಮಾದರಿಯ ವ್ಯವಸಾಯ, ತೋಟಗಾರಿಕೆ, ರೇಷ್ಮೆ ಸಾಕಾಣಿಕೆ, ಕುರಿ ಸಾಕಾಣಿಕೆ, ಭೂ ಸರ ಸಂರಕ್ಷಣೆ ಮತ್ತು ಹನಿ ನೀರಾವರಿ ಬಳಕೆಯ ಬಗ್ಗೆ ತರಬೇತಿ ಕೊಡಲಾಗುತ್ತದೆ. ಇಲ್ಲಿ ಕೆಲಸದಲ್ಲಿ ನಿರತರಾದ ಬಂದಿಗಳು ವ್ಯವಸಯಗಾರರಂತೆ ಕಾಣುತ್ತಾರೆ.

ಹೊಸ ಬಯಲು ಬಂದೀಖಾನೆ ಪ್ರಸ್ತಾವನೆ

ರಾಜ್ಯದಲ್ಲಿ ಇನ್ನೂ ಮೂರು ಕಡೆಗಳಲ್ಲಿ ಅಂದರೆ ಯಾದಗಿರಿ, ಮಂಡ್ಯ ಮತ್ತು ಕಡೂರು ಗಳಲ್ಲಿ ಬಯಲು ಬಂದೀಖಾನೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು ಈಗಾಗಲೇ ಕಡೂರಿನಲ್ಲಿ ೫೫.೧೩ ಎಕರೆ ಜಮೀನು ಇಲಾಖೆಯ ಹಸ್ತಾಂತರವಾಗಿದೆ. ಅದೇ ರೀತಿ ಮಂಡ್ಯದಲ್ಲಿ ೪೦ ಎಕರೆ ಹಾಗೂ ಯಾದಗಿರಿಯಲ್ಲಿ ೧೦೦ ಎಕರೆ ಜಮೀನು ಗುರುತಿಸಲಾಗಿದ್ದು ಇಲಾಖೆಗೆ ಹಸ್ತಾಂತರವಾಗಬೇಕಾಗಿದೆ.

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ : ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್