ಸಂಘಟನೆ

ಇಲಾಖೆಯು ಗೃಹ ಸಚಿವರ ಉಸ್ತುವಾರಿಯಲಿದ್ದು, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು (ಪೀ ಸೀ ಎ ಎಸ್) ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹನಿರೀಕ್ಷಕರು ಕಾರಾಗೃಹಗಳ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಪೋಲೀಸ್ ಉಪಮಹನಿರೀಕ್ಷಕರು(ಕಾರಾಗೃಹ), ಕಾರಾಗೃಹಗಳ ಉಪಮಹನಿರೀಕ್ಷಕರು(ಕೇಂದ್ರ ಕಾರ್ಯಸ್ಥಾನ) ಮತ್ತು ಪತ್ರಾಂಕಿತ ವ್ಯವಸ್ಥಾಪಕರು ಕೇಂದ್ರ ಕಚೀರಿಯಲ್ಲಿ ಸಹಾಯಕರಾಗಿರುತ್ತಾರೆ. ಎಲ್ಲ ಕೇಂದ್ರ/ ಜಿಲ್ಲಾ, ಕಾರಾಗೃಹಗಳ ಮುಖ್ಯ ಅಧೀಕ್ಷಕರು / ಅಧೀಕ್ಷಕರುಗಳು ಸಂಬಂಧಿಸಿದ ಕಾರಾಗೃಹಗಳ ಉಸ್ತುವಾರಿಯನ್ನು ನೋಡಿಕೊಳ್ಳುತಿರುತ್ತಾರೆ.

ಆಡಳಿತ ವ್ಯವಸ್ಥೆಯ ರೂಪಕ

ಕರ್ನಾಟಕ ರಾಜ್ಯದಲ್ಲಿ ಒಟ್ಟೂ ೧೦೨ ಕಾರಾಗೃಹಗಳಿದ್ದು, ಅವುಗಳಲ್ಲಿ ೮ ಕೇಂದ್ರ ಕಾರಾಗೃಹಗಳು, ೧೫ ಜಿಲ್ಲಾ ಕಾರಾಗೃಹಗಳು, ೪ ಜಿಲ್ಲಾ ಉಪ ಕಾರಾಗೃಹಗಳು, ೨ ವಿಶೇಷ ಉಪ ಕಾರಾಗೃಹಗಳು, ೧ ಬಯಲು ಬಂದೀಖಾನೆ, ೧ ತರುಣ ಬಂದೀಖಾನೆ ಮತ್ತು ೭೦ ತಾಲ್ಲೂಕು ಉಪ ಕಾರಾಗೃಹಗಳು (೩೦ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಉಪ ಕಾರಾಗೃಹಗಳು ಮತ್ತು ೪೦ ಪೊಲೀಸ್ ಸಿಬ್ಬಂದಿ ಕಂದಾಯ ಇಲಾಖೆಯ ಆಡಳಿತದಲ್ಲಿರುವ ತಾಲ್ಲೂಕು ಉಪ ಕಾರಾಗೃಹಗಳು)

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ : ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್