ಪೆರೋಲ್
ಸಂಬಂದಿಕರನ್ನು ಬೇಟಿ ಮಾಡಲು, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಸಂಸಾರದ ಕಷ್ಟ ಸುಖಗಳಲ್ಲಿ ಭಾಗವಹಿಸಲು ಬಂದಿಗಳಿಗೆ ಪೆರೋಲ್ ಮೇಲೆ ಊರಿಗೆ ಹೋಗಿ ಬರಲು ಮತ್ತು ಅವರು ಜೈಲಿಗೆ ಬರುವುದಕ್ಕೆ ಮೊದಲು ಅವರು ಇದ್ದಂತಹ ಸಮಾಜದ ಸಂಪರ್ಕ ಪಡೆಯಲು ಅನುಕೂಲತೆಯನ್ನು ಮಾಡಿಕೊಡಲಾಗಿದೆ.
ತುರ್ತು ಪೆರೋಲ್
ಸಜಾ ಬಂದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡುವ ಕಾರಾಗೃಹಗಳ ನಿಯಮಾವಳಿಗಳಿಗೆ ತಿದ್ದುಪಡಿಯನ್ನು ತರಲಾಗಿದ್ದು, `ತುರ್ತು ಪೆರೋಲ್' ಎಂಬ ಹೆಸರಿನಡಿಯಲ್ಲಿ 15 ದಿನಗಳ ತಾತ್ಕಾಲಿಕ ರಜೆಯನ್ನು ನೀಡುವ ಅವಕಾಶ ಕಲ್ಪಿಸಲಾಗಿದೆ. ತುರ್ತು ಪೆರೋಲ್ ಮೇಲೆ ಬಂದಿಗಳನ್ನು ಬಿಡುಗಡೆ ಮಾಡುವ ಅದಿsಕಾರವು ಆಯಾ ಕಾರಾಗೃಹ ಸಂಸ್ಧೆಯ ಮುಖ್ಯ ಅಧೀಕ್ಷಕರು / ಅಧೀಕ್ಷಕರಿಗೆ ಇರುತ್ತದೆ.
ಕಳೆದ ಮೂರು ವರ್ಷಗಳಲ್ಲಿ ಪೆರೋಲ್ ಮತ್ತು ತುರ್ತು ಪೆರೋಲ್ ಮೇಲೆ ಬಿಡುಗಡೆಯಾದ ಬಂದಿಗಳ ವಿವರಗಳು ಕೆಳಗಿನಂತಿರುತ್ತದೆ
ವರ್ಷ | ಪೆರೋಲ್ ಮೇಲೆ ಬಿಡುಗಡೆಯಾದ ಬಂದಿಗಳ ಸಂಖ್ಯೆ | ತುರ್ತು ಪೆರೋಲ್ ಮೇಲೆ ಬಿಡುಗಡೆಗೊಂಡ ಬಂದಿಗಳ ಸಂಖ್ಯೆ |
---|---|---|
2017 | 430 | 215 |
2018 | 463 | 201 |
2019 | 461 | 163 |
ಪೆರೋಲ್ ನಿಯಮಗಳಿಗೆ ತಿದ್ದುಪಡಿಃ
ಬಂದಿಗಳನ್ನು ಪೆರೋಲ್ ಬಿಡುಗಡೆ ರಜೆಯ ಮೇಲೆ ಬಿಡುಗಡೆ ಮಾಡುವ ನಿಯಮಾವಳಿಗಳಿಗೆ ತಿದ್ದುಪಡಿಯನ್ನು ತರಲಾಗಿದೆ. ಈ ದಿಶೆಯಲ್ಲಿ ಸರ್ಕಾರವು ಪೆರೋಲ್ ಗೆ ನಿಗದಿಪಡಿಸಿದ್ದ ಬದ್ರತಾ ಠೇವಣಿ ಹಣ ರೂ.6,000/- ರಿಂದ ರೂ.1,000/-ಕ್ಕೆ ಇಳಿಸಿದ್ದು ಇಬ್ಬರು ಜಾಮೀನುದಾರರ ಬದಗಿ ಒಬ್ಬ ಜಾಮೀನುದಾರರನ್ನು ನಿಗದಿಪಡಿಸಿದೆ. ಜಾಮೀನುದಾರರು ಅಲಭ್ಯವಾದ ಪ್ರಸಂಗಗಳಲ್ಲಿ ರೂ.3,000/- ಭದ್ರತಾ ಠೇವಣಿ ಹಾಗೂ ವೈಯಕ್ತಿಕ ಬಂಧಪತ್ರದ ಮೇಲೆ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಅವಧಿಪೂರ್ವ ಬಿಡುಗಡೆಃ
ಜೀವಾವದಿ ಶಿಕ್ಷಾ ಬಂದಿಗಳು ಹಾಗೂ ಅಲ್ಪವದಿ ಶಿಕ್ಷಾ ಬಂದಿಗಳು ಅವದಿಗೆ ಮುನ್ನ ಬಿಡುಗಡೆಗಾಗಿ ಎಲ್ಲಾ ಕೇಂದ್ರ ಹಾಗೂ ಜಿಲ್ಲಾ ಕಾರಾಗೃಹಗಳಲ್ಲಿ ಸಲಹಾ ಸಮಿತಿಗಳನ್ನು ರಚಿಸಲಾಗಿದೆ. ಮಾಫಿ ಸೇರಿ 2/3 ರಷ್ಟು ಶಿಕ್ಷೆ ಅನುಭವಿಸಿದ ಬಂದಿಗಳ ವಿಚಾರಾಂಶಗಳನ್ನು ಜಿಲ್ಲಾ ದಂಡಾಧಿಕಾರಿಗಳು ಮತ್ತು ಜಿಲ್ಲಾ ಆರಕ್ಷಕ ಅಧೀಕ್ಷಕರ ಅಭಿಪ್ರಾಯಗಳೊಂದಿಗೆ ಈ ಸಲಹಾ ಸಮಿತಿಯ ಮುಂದೆ ಮಂಡಿಸಲಾಗುವುದು. ಸಲಹಾ ಸಮಿತಿಯು ಅಂತಹ ಬಂದಿಗಳ ವಿಚಾರಾಂಶಗಳನ್ನು ಪರಿಶೀಲಿಸಿ ಅವರ ಅವದಿಗೆ ಮುನ್ನ ಬಿಡುಗಡೆಯನ್ನು ಶಿಫಾರಸ್ಸು ಮಾಡುತ್ತದೆ ಇಲ್ಲವೇ ತಿರಸ್ಕರಿಸಲ್ಪಡುತ್ತದೆ. ಈ ಸಲಹಾ ಸಮಿತಿಯಿಂದ ಅವದಿಗೆ ಮುನ್ನ ಬಿಡುಗಡೆಗೆ ಶಿಫಾರಸ್ಸು ಮಾಡಲ್ಪಟ್ಟ ಬಂದಿಗಳ ಕಾಗದ ಪತ್ರಗಳನ್ನು ಕರ್ನಾಟಕ ಕಾರಾಗೃಹಗಳ ಮಹಾನಿರೀಕ್ಷಕರ ಅಬಿಪ್ರಾಯದೊಂದಿಗೆ ಸರ್ಕಾರಕ್ಕೆ ಆದೇಶಕ್ಕಾಗಿಸಲ್ಲಿಸಲಾಗುತ್ತದೆ.
ಕಳೆದ ವರ್ಷಗಳಲ್ಲಿ ಅವದಿs ಪೂರ್ವ ಬಿಡುಗಡೆಯಾದ ಬಂದಿಗಳ ವಿವರ ಕೆಳಕಂಡತಿದೆ.
ವರ್ಷ | ಬಿಡುಗಡೆಯಾದ ಖೈದಿಗಳ ಸಂಖ್ಯೆ | ||
---|---|---|---|
2016-17 |
|
||
2017-18 |
|
||
2018-19 | 79 (09.09.2018) | ||
2019-20 | 141 (16.10.2019) |