ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು

ಬಂದಿಗಳು ಒಳಾಂಗಣ ಹಾಗೂ ಹೊರಾಂಗಣ ಆಟಗಳಾದ ಚೆಸ್, ಕೇರಂ ವಾಲೀಬಾಲ್, ಕಬ್ಬಡಿ, ಖೋ ಖೋ, ಕ್ರಿಕೆಟ್ ಇತ್ಯಾದಿ ಆಟಗಳನ್ನಾಡಲು ಅನುಕೂಲ ಮಾಡಿಕೊಡಲಾಗಿದೆ. ಗಣೇಶೋತ್ಸವ, ರಾಜ್ಯೋತ್ಸವ ಇಂತಹ ಅನೇಕ ಸಂದರ್ಬಗಳಲ್ಲಿ ಬಂದಿಗಳು ನಾಟಕಗಳನ್ನಾಡಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಮಾಡಿಕೊಡಲಾಗಿದೆ. ಬಂದಿಗಳ ಮನೋಭಿವೃದ್ದಿಗಾಗಿ ಯೋಗ ತರಗತಿಗಳನ್ನು ನಡೆಸಲಾಗುತ್ತಿದೆ.

ಅಂತರ ಕಾರಾಗೃಹಗಳ ಬಂದಿಗಳ ಕ್ರೀಡಾಕೂಟ:

ಇಲಾಖೆಯಲ್ಲಿ ಪ್ರಥಮ ಬಾರಿಗೆ ರಾಜ್ಯದ ವಿವಿಧ ಕಾರಾಗೃಹಗಳ ಸಜಾ ಸಜಾ ಬಂದಿಗಳ ಕ್ರೀಡಾಕೂಟವನ್ನು ಜೂನ್ ೨೦೧೨ (೨೪ ರಿಂದ ೨೬) ಏರ್ಪಡಿಸಲಾಗಿತ್ತು. ಸದರಿ ಕ್ರೀಡಾಕೂಟಗಳನ್ನು ಎರಡು ಕಾರಾಗೃಹಗಳಲ್ಲಿ ಬೆಂಗಳೂರು ಹಾಗೂ ಮೈಸೂರು ಕೇಂದ್ರ ಕಾರಾಗೃಹಗಳಲ್ಲಿ ಆಯೋಜಿಸಿ ವಿವಿಧ ಕ್ರೀಡಾಗಳಾದ ಕ್ರಿಕೆಟ್, ಕಬಡ್ಡಿ, ಥ್ರೋಬಾಲ್, ಟೆನ್ನಿ ಕಾಯ್ಟ್, ವಾಲೀಬಾಲ್, ಚೆಸ್ ಹಾಗೂ ಕೇರಂ ಪಂದ್ಯಗಳನ್ನು ಆಡಿಸಲಾಯಿತು. ಎಲ್ಲ ಬಂದಿಗಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿತ್ತು ಎಲ್ಲ ತಂಡಗಳಲ್ಲಿನ ಉತ್ಸಾಹವನ್ನು ಐ ಪಿ ಎಲ್ ಕ್ರೀಡಾಗಳಲ್ಲಿ ಸಂನ್ವಾಗಿ ಕಂಡುಬರುವಂತಹ ಉತ್ಸಾಹಕ್ಕೆ ಸಮಾನಾಂತರವಾಗಿತ್ತು.

ಪಂದ್ಯಗಳನ್ನು ಗೆದ್ದ ತಂಡಗಳಿಗೆ ಟ್ರೋಫಿ ಮತ್ತು ಬಹುಮಾನಗಳನ್ನು ನೀಡಲಾಯಿತು.

ಬಂದಿಗಳಿಗೆ ಯೂತ್ ಲೀಡರ್‌ಶಿಪ್ ಟ್ರೈನಿಂಗ್ ಪ್ರೋಗ್ರಾಮ್(ವೈ.ಎಲ್.ಟಿ.ಪಿ)

ಬಂಡಿಗಳ ಮನಪರಿವರ್ತನೆ ಮಾಡಿ ಅವರನ್ನು ಸತ್ಪ್ರಜೆಗಳನ್ನಾಗಿ ಸಮಾಜಕ್ಕೆ ಸೇರಿಸುವ ಕಾರ್ಯದಲ್ಲಿ ಇಲಾಖೆಯು ಪ್ರತಿಸ್ಥಿತ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಜಂಟಿಯಾಗಿ ಯೂತ್ ಲೀಡರ್ಶಿಪ್ ಟ್ರೈನಿಂಗ್ ಪ್ರೋಗ್ರಾಮ್ (ವೈಎಲ್ ಟಿ ಪಿ) ಕಾರ್ಯಕ್ರಮವನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮವು ಬಂದಿಗಳ ಮೀಸಲಿರುವ ಕಾರ್ಯಕ್ರಮವಾಗಿದ್ದು ೬೦ ದಿನಗಳ ಕಾಲ (೧.೬.೨೦೧೨-೩೧.೭.೨೦೧೨) ಜರಗಿತು. ಕಾರ್ಯಕ್ರಮದಲ್ಲಿ ಬಂದಿಗಳಿಗೆ ವ್ಯಕ್ತಿತ್ವ ವಿಕಸನ, ಒತ್ತಡ ನಿರ್ವಹಣೆ , ಮನಃಶಾಂತಿ ಸುದರ್ಶನ ಕ್ರಿಯೆಯ ಮೂಲಕ ಒತ್ತಡ, ಆಯಾಸ ಮತ್ತು ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕುವ ವಿಧಾನಗಳ ಬಗ್ಗೆ ಸುಧೀರ್ಘವಾಗಿ ತಿಳಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ವಿವಿಧ ಕಾರಾಗೃಹಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳು

  • ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವತಿಯಿಂದ ಯೋಗ ಶಿಬಿರ ೨. ಓಂ ಯೋಗ ಪ್ರತಿಷ್ಠಾನ ಇವರ ವತಿಯಿಂದ ಪ್ರಾಣಾಯಾಮ ಮತ್ತು ಸರಳ ಯೋಗಾಸನ ಶಿಬಿರ
  • ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವತಿಯಿಂದ ಯೋಗ ಶಿಬಿರ
  • ಓಂ ಯೋಗ ಪ್ರತಿಷ್ಠಾನ ಇವರ ವತಿಯಿಂದ ಪ್ರಾಣಾಯಾಮ ಮತ್ತು ಸರಳ ಯೋಗಾಸನ ಶಿಬಿರ
  • ಬುದ್ದ ದಮ್ಮ ಕೇಂದ್ರ ವಾಟ್ಯೀಂದ ಬುದ್ದ ಜಯಂತಿ ಅಂಗವಾಗಿ ಧ್ಯಾನ ಶಿಬಿರವನ್ನು ಆಯೋಜಿಸಲಾಯಿತು
  • ಕರ್ನಾಟಕ ರಾಜ್ಯ ಜನಸದ್ಭಾವನ ಆರ್ಗನೈಸೇಶನ್ ವತಿಯಿಂದ ಮನಃಪರಿವರ್ತನೆ ಸಂದೇಶ ಶಿಬಿರ
  • ಮತ ಮನಿಕೆಶ್ವರಿ ಟ್ರಸ್ಟ್ ವತಿಯಿಂದ ರಾಜ್ಯದ ವಿವಿಧ ಕಾರಾಗೃಹದಲ್ಲಿ ಅಹಿಂಸಾ ತತ್ವ ಭೋದನೆ ಮತ್ತು ಯೋಗ ಧ್ಯಾನ ಶಿಬಿರ
  • ವಿವಿಧ ಕ್ರೈಸ್ತ ಸಂಸ್ಥೆಗಳಿಂದ ಕ್ರಿಸ್ಮಸ್ ಹಬ್ಬದ ಆಚರಣೆಗಳು - ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರತಿಭಾ ಸ್ಪರ್ಧೆ ಕಾರ್ಯಕ್ರಮಗಳು
  • ಮೈಸೂರು ಕೇಂದ್ರ ಕಾರಾಗೃಹದಲ್ಲಿ ಬಂದಿಗಳ ಸಲುವಾಗಿ ಶ್ರೀಮತಿ ಎಂ. ಕೆ. ಸೀತಾಲಕ್ಷ್ಮಿ ಇವರಿಂದ ಪ್ರಾಣಿಕ ಹೀಲಿಂಗ್ ಶಿಬಿರ.
  • ಬೆಂಗಳೂರಿನ ಇಸ್ಕಾನ್ ಸಂಸ್ಥೆಯ ವತಿಯಿಂದ ಗೀತ ಜಯಂತಿ ಕಾರ್ಯಕ್ರಮ ೧೦೮ ಪ್ರತಿ ಭಗವದ್ಗೀತೆ ಹಂಚಿಕೆ ಮತ್ತು ಸಿಡಿ, ಜಪಮಾಲ ಕಾರಾಗೃಹದ ಗ್ರಂಥಾಲಯಕ್ಕೆ ಕೊಡುಗೆ ಕೀರ್ತನೆ ಮತ್ತು ಪ್ರವಚನ.

ಬಂದಿಗಳಿಂದ ನಾಟಕ ಪ್ರದರ್ಶನ :

ಕಾರಾಗೃಹದ ಬಂದಿನಿವಾಸಿಗಳಿಗೆ ರಂಗ ಕಲೆಯಲ್ಲಿ ಸಂಕಲ್ಪ , ಮೈಸೂರು ಇವರ ವತಿಯಿಂದ ತರಬೇತಿ ನೀಡಿ ಪ್ರಸಕ್ತ ಸಾಲಿನಲ್ಲಿ ಜೈಲ್ ಜೈಲಿನಿಂದ ಜೈಲಿಗೆ ರಂಗ ಯಾತ್ರೆ ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಧಾರವಾಡ ಕೇಂದ್ರ ಕಾರಾಗೃಹದ ಬಂಡಿ ನಿವಾಸಿಗಳಿಂದ ಶೇಕ್ಸ್ಫಿಯರ್ನ 'ಕಿಂಗ್ ಲಿಯರ್' ಚಂದ್ರಶೇಕರ್ ಕಂಬಾರ ವಿರಚಿತ 'ಶಿವರಾತ್ರಿ' ಈ ನಾಟಕಗಳನ್ನು ಬೆಂಗಳೂರು, ಬೆಳಗಾವಿ, ಧಾರವಾಡ ನಗರದ ಪ್ರತಿಷ್ಠಿತ ರಂಗ ಮಂದಿರಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ನೀಡಲಾಗಿದ್ದು ಸಾರ್ವಜನಿಕರ ಹಾಗೂ ರಂಗ ವಿಮರ್ಶಕರ ಪ್ರಶಂಶೆಗೆ ಪಾತ್ರರಾಗಿರುತ್ತಾರೆ.

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್