ವೀಡಿಯೋ ಕಾನ್ಫರೆನ್ಸಿಂಗ್:

ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಬಂದಿಗಳನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸುವ ವಿನೂತನ ವ್ಯವಸ್ಥೆಯನ್ನು ಒದಗಿಸುವಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದ್ದು ಪ್ರಸ್ತುತ ೭ ಕೇಂದ್ರ ಕಾರಾಗೃಹಗಳು, ೧೩ ಜಿಲ್ಲಾ ಕಾರಾಗೃಹಗಳು, ೪ ಜಿಲ್ಲಾ ಕೇಂದ್ರ ಉಪಕರಗೃಹಗಳು, ೩ ಉಪಕರಗೃಹಗಳು ಮತ್ತು ಸಂಬಂದಿಸಿದ ನ್ಯಾಯಾಲಯಗಳ ನಡುವೆ ಚಾಲ್ತಿಯಲ್ಲಿವೆ. ಈ ವ್ಯವಸ್ಥೆಯ ಮೂಲಕ ೨೦೧೨-೧೩ನೇ ಸಾಲಿನಲ್ಲಿ ೪೦೨೮೯ ವಿಚಾರಣಾ ಬಂದಿಗಳನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸಲಾಗಿದ್ದು ರೂ ೨,೦೯,೯೭,೧೦೩.೦೦ ಗಳನ್ನು ಉಳಿತಾಯ ಮಾಡಲಾಗಿದೆ.

ಮಲ್ಟಿ ಪಾಯಿಂಟ್ ವೀಡಿಯೋ ಕಾನ್ಫರೆನ್ಸಿಂಗ್:

ಮಲ್ಟಿ ಪಾಯಿಂಟ್ ವೀಡಿಯೋ ಕಾನ್ಫರೆನ್ಸಿಂಗ್ ಇದು ದೇಶದಲ್ಲೇ ವಿನೂತನ ಉಪಕ್ರಮವಾಗಿದ್ದು ಈ ವ್ಯವಸ್ಥೆಯನ್ನು ಸಿಟಿ ಕೋರ್ಟ್ ಕಂಪೆಕ್ಷ್, ಬೆಂಗಳೂರು ಅಳವಡಿಸಲಾಗಿರುತ್ತದೆ. ಈ ವ್ಯವಸ್ಥೆಯು ವಿಚಾರಣೆ ನ್ಯಾಯಾಲಯ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹವನ್ನೇ ಸಂಪರ್ಕದಲ್ಲಿಡುವುದರ ಜೊತೆಗೆ ಬೆಂಗಳೂರು ಹೊರಗಡೆ ಇರುವ ೪ ಕಾರಾಗೃಹಗಳನ್ನು ಏಕ ಕಾಲಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದ ಬೆಂಗಳೂರಿನ ಹೊರಗಿರುವ ಕಾರಾಗೃಹಗಳಲ್ಲಿ ದಾಖಲಿರುವ ಬಂದಿಗಳನ್ನು ದೈಹಿಕವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸದೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಬಹುದಾಗೀದೆ.

ಐ. ಪಿ. ದೂರವಾಣಿಗಳು

ವರದಿಯ ವರ್ಷದಲ್ಲಿ ಇ-ಆಡಳಿತ ಇಲಾಖೆಯ ಕೆಸ್ವಾನ್ ಯೋಜನೆಯಲ್ಲಿ ಕಾರಾಗೃಹಗಳಿಗೆ ಐ. ಪಿ ದೂರವಾಣಿಗಳನ್ನು ಅಳವಡಿಸಲು ಕ್ರಮ ಜರುಗಿಸಲು ಎಲ್ಲ ಕೇಂದ್ರ ಕಾರಾಗೃಹಗಳು ಹಾಗೂ ಜಿಲ್ಲಾ ಕೇಂದ್ರ ಉಪಕರಗೃಹಗಳಿಗೆ ಐ. ಪಿ ದೂರವಾಣಿಗಳನ್ನು ಒದಗಿಸಲಾಗಿದೆ.

ಬಂದಿಗಳಿಗೆ ದೂರವಾಣಿ ಸೌಲಭ್ಯ : ಇತರೆ ಕಾರಾಗೃಹಗಳಿಗೆ ವಿಸ್ತರಣೆ:

ದೇಶದಲ್ಲಿ ಪ್ರಥಮವೆಂಬಂತೆ ಬಂದಿಗಳಿಗೆ ಪೇ ಟೆಲಿಫೋನ್-ಪಾವತಿ ದೂರವಾಣಿ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಈ ಸೌಲಭ್ಯವನ್ನು ಪ್ರಪ್ರಥಮವಾಗಿ ಬೆಂಗಳೂರು ಮತ್ತು ಮೈಸೂರು ಕೇಂದ್ರ ಕಾರಾಗೃಹಗಳಲ್ಲಿ ಒದಗಿಸಲಾಗಿರುತ್ತದೆ. ಅನಂತರ ಈ ಸೌಲಭ್ಯವನ್ನು ಕೇಂದ್ರ ಕಾರಾಗೃಹ ಬೆಳಗಾವಿ(೧೫.೪.೦೮), ಗುಲ್ಬರ್ಗ(೯.೪.೦೮), ಬಿಜಾಪುರ(೮.೫.೦೮), ಧಾರವಾಡ (೨೧.೦೬.೦೮) ಮತ್ತು ಬಳ್ಳಾರಿ(೨೦.೬.೦೮) ವಿಸ್ತರಿಸಲಾಗಿದೆ. ಈ ಸೌಲಭ್ಯದ ಮೂಲಕ ಬಂದಿಗಳು ಅವರ ಸಂಬಂದಿಕರೊಡನೆ, ಮತ್ತು ವಕೀಲರೊಡನೆ ಸಂಭಾಷಣೆ ಮಾಡಲು ಅವರಿಗೆ ನೀಡಲಾಗಿರುವ ಪ್ರೇಪೆಯ್ಡ್ ಕಾರ್ಡು ಮೂಲಕ ಅನುಕೂಲ ಕಲ್ಪಿಸಲಾಗಿದೆ.

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್